Tuesday, January 17, 2012

ಅಜೀರ್ಣಿಗಳ ಸಂಕಟ....

ಎಲ್ಲವನ್ನೂ ತೀಕ್ಷ್ಣವಾಗಿ ನೋಡುವ ವಿಶಿಷ್ಟ ದೃಷ್ಟಿಕೋನದ ದಿನೇಶ್  ಅಮಿನಮಟ್ಟು ಅವರ ಬರಹವನ್ನು ಅರಗಿಸಿಕೊಳ್ಳಲಾರದವರು ಮುಖ ಮೈ ಪರಸಿಕೊಳ್ಳುವ ಆಟಾಟೋಪ ಶುರು ಮಾಡಿದ್ದಾರೆ. ಮುಕ್ತ ಚರ್ಚೆಯಲ್ಲಿ ಸಂವಾದಗೊಳ್ಳಬೇಕಾದ ವಿಷಯಗಳನ್ನೂ ಬೀದಿಯ ರಗಳೆ ಮಾಡುವ ಜನಕ್ಕೆ ಯಾರು ಏನೂ ಮಾಡುವಂತಿಲ್ಲ. ವಾಸ್ತವವನ್ನು ಒಪ್ಪಬೇಕಾದ ಜರೂರಿನ ಪ್ರತಿಪಾದನೆ ದಿನೇಶ್ ಅವರ ಬರಹ. ಅದು ವಿವೇಕಾನಂದರ ಜಯಂತಿ ಸಂದರ್ಭದಲ್ಲೇ ಏಕೆ?, ಮಂಗಳೂರಿನಲ್ಲಿ ಯುವಜನೋತ್ಸವ ನಡೆಯುತ್ತಿರುವ ಸಂದರ್ಭದಲ್ಲೇ ಏಕೆ?  ಗಾಂಧಿ ಬಗ್ಗೆ ಯಾಕೆ ಇಂತಹ ವಾಸ್ತವಾಂಶದ ಮಾತುಗಳನ್ನು ಇವರು ಬರೆಯಲಾರರು?, ಮುಸ್ಲಿಮರ ದೌರ್ಜನ್ಯ, ಹಿಂಸೆಗಳಿಗೆ ಇವರ ಮೌನವೇಕೆ?, ವಿವೇಕಾನಂದರು ಇವರಿಗೇನು ಮಾಡಿದ್ದರು?, ಇದು ಪ್ರಚಾರದ ತಂತ್ರವೋ? ಎಂಬ ಬಾಲಿಶ ಪ್ರಶ್ನೆಗಳಿಂದ ಪ್ರಯೋಜನವಿಲ್ಲ. ಗಾಂಧಿಯಾಗಲೀ, ಬುದ್ಧನಾಗಲೀ, ಬಸವನಾಗಲೀ, ಅಣ್ಣಾ ಹಜಾರೆಯಾಗಲೀ ಮನುಷ್ಯರೇ ಹೊರತು ದೇವರುಗಳಲ್ಲ. ಮನುಷ್ಯ ಮಾತ್ರನಾಗಿ, ಅದರಲ್ಲೂ ಅನೇಕ ರೋಗಳಿಂದ ಬಳಲುತ್ತಿದ್ದ, ತಿಂಡಿಪೋತನಾಗಿದ್ದ ನರೇಂದ್ರ ವಿವೇಕಾನಂದನಾಗಲು ಸಾಧ್ಯವಾದರೆ ಯಾರಾದರೂ ಪರಿಶ್ರಮದಿಂದ ಏನನ್ನಾದರೂ ಸಾಧಿಸಲು ಸಾಧ್ಯ ಎಂಬ ಮಾತುಗಳಲ್ಲಿ ತಪ್ಪೇನಿದೆ… ದೈವೀತನದ ಮೆರವಣಿಗೆಯಲ್ಲಿ ಮನುಷ್ಯತ್ವವನ್ನು ಮರೆಸುವ ಪ್ರಯತ್ನಗಳಾಗುವ ಸಂದರ್ಭಗಳಲ್ಲಿ ದಿನೇಶ್ ಅವರ ನೋಟಗಳು ಹೊಸ ಬೆಳಕನ್ನು ದರ್ಶಿಸಿದರೆ ಅದರ ತೀಕ್ಷ್ಣತೆ ತಾಳಲು ಸಮರ್ಥವಿದ್ದವರು ಅದನ್ನು ಸಹಿಸುತ್ತಾರೆ, ಅಸಮರ್ಥರು ದಡದಲ್ಲಿ ನಿಂತು ಸುಳಿಯ ಆಳ ನೋಡುತ್ತಾರೆ,  ನೋಡಲಿ, ಅದು ಬಿಟ್ಟು ವ್ಯರ್ಥವಾಗಿ ಸುಳಿಗೆ ಸಿಕ್ಕು ಸಾಯುವುದು ಬೇಡ… ಕೂಗಾಡಿ ರಂಪ ಮಾಡುವವರು ಒಂದೆರೆಡು ಬಾರಿ ಅಂಕಣವನ್ನು ಮತ್ತೆ ಓದಲಿ... ಹಾಗೂ ಅರ್ಥವಾಗದೇ ಹೋದರೆ ಅವರ ಮಿತಿ ಅದು......

2 comments:

  1. ಸಂಜಯ.ಚಿಕ್ಕಮಠJanuary 17, 2012 at 10:46 PM

    ಹಾಗೆ ದಯಾನಂದಜೀ ಅದು,,ಕೆಲವರಿಗೆ ಕೆಲವೊಂದನ್ನು ಅರಗಿಸಿಕೊಳ್ಳಲು ಆಗಲ್ಲ,,,ಇದು ಪ್ರಜಾಪ್ರಭುತ್ವದ ಇನ್ನೊಂದು ಮುಖ

    ReplyDelete