Sunday, April 3, 2011

ಕಳ್ಳ ಬೆಕ್ಕು ಮತ್ತು ಕಾಮಿ ಹೆಣ್ಣು.....

ಗೋಡೆ ಹಾರಿ, ಸೂರು ತೂರಿ
ಧೂಳು ಮೈ ತುಂಬಿ ಬರುವ ಕಳ್ಳಬೆಕ್ಕು,,,,
ಬಚ್ಚಲಲ್ಲಿ ಮಳ್ಳಿ
ಕಾಮಿ ಹೆಣ್ಣು.....

ಸೆರಗು ಜಾರಿ, ರವಿಕೆ ಸೋಸಿ ಬೆತ್ತಲಾಗಿ
ಕುಂಡೆತೊಳೆವ ಹೊತ್ತಲ್ಲಿ
ರಪ್ಪನೆ ಮೇಲೆರಗಿದ್ದು
ಕಳ್ಳ ಬೆಕ್ಕು;
ಖಾಲಿ ಕುಪ್ಪಸದ ಮರೆಯಲ್ಲಿ
ತೆವಲುಗೊಂಡ
ಬಚ್ಚಲ ಕಪ್ಪು ಕರಿಗೋಡೆಗಳಲ್ಲಿ
ಕಣ್ಣು ಮೂಡಿ
ಬೆಕ್ಕು ರಮಿಸುವ
ತುರಿಕೆ ಸುಖದ ಇಡೀ ಆಪೋಶನ..

ಬಚ್ಚಲ ನೀರೊಲೆಯ ಕೆಂಡದಲ್ಲಿ ನಚ್ಚಗಾದ
ಬಿಸಿನೀರಲ್ಲಿ ಮಿಂದ ಮೈಯಿ,
ಆರಹ ಹಸಿ ತಲೆಗೆ ಸಾಂಬ್ರಾಣಿ ಹೊಗೆಕೊಡುವ
ವೇಳೆಗೆ
ಬೆಕ್ಕು- ಮರಿಬೆಕ್ಕು!!!!
ಬೆಕ್ಕಿನ ಮರಿ!?,
ಕಳ್ಳ ಯಾರು ಕಾಮಿ????

No comments:

Post a Comment