Tuesday, May 3, 2011

ದೇವಧೂತನ ಮಗಳ ಮೊಲೆಗಳಲ್ಲಿ...
***
ಆಸೆ
ದೇವಧೂತನ ಮಗಳ ಮೊಲೆಗಳಲ್ಲಿ
ಮುಖವಿಟ್ಟು ಮಲಗಿಬಿಡಲು
ಹಗಲೂ- ರಾತ್ರೀ
ರಾತ್ರೀ – ಹಗಲೂ..

***
ಮಿತಿ ಮೀರುವ
ಲಾಯಕ್ಕುತನಗಳಿಗಾಗಿ
ಸರದಿ ನಿಲ್ಲುವ
ಕೆಲಸ
ಅವಳ
ತೊಂಡೆ ತುಟಿಗಳ ಮೆಲ್ಲಲು..
***
ಸತ್ತ ಅವಳ
ಬಿಳಿ ನಿತಂಬಗಳಲ್ಲಿ
ಗೊನೆಗೂಡುವ ಮಾಂಸಕ್ಕಾಗಿ
ಮುತ್ತುವ
ನೂರಾರು ಹದ್ದುಗಳಲ್ಲಿ
ನಾನೂ
ಒಬ್ಬ
ನಲ್ಲ...

1 comment:

  1. ಪ್ರೀತಿಯ ಗೆಳೆಯ.. ಕವಿತೆಯ ಸಾರ ತುಂಬಾ ಚೆನ್ನಾಗಿದೆ....ನಿನ್ನ ಆಲೋಚನೆ ವಿಶಾಲವಾಗಿದೆ. ನನಗೆ ಮೆಚ್ಚುಗೆಯಾಯ್ತು

    ReplyDelete