Monday, March 28, 2011

ಮತ್ತೆ ಮತ್ತೆ ಮಳೆ
ಕಾಡುಗಳು
ಎಲೆಸುರಿಸಿವೆ
ಹಬ್ಬುತ್ತಿವೆ
ಚಿಗುರು
ಗಾಳಿ ಗುರುಗುಟ್ಟಿ ಬೀಸಿ
ತಡವರಿಸುವ
ತರಗು
ಹನಿ ಹನಿ ಹಸಿದು
ಸುರಿದು ಮುತ್ತಿಡುತಿವೆ
ಭುವಿಗೆ
ಮತ್ತೆ
ಮಳೆ ಹುಯ್ಯುತಿದೆ
ಕನಸುಗಳು
ಕೊನರಲು
ಮನಸು ಹಸಿರಾಗಲು.....
(28-03-2011, ಚಾಮರಾಜನಗರ.)

No comments:

Post a Comment