Sunday, December 11, 2011

ತಾರೆ?! ಹುಡುಗಿ?!

ತಾರೆ?! ಹುಡುಗಿ?!


-1-
ಖಾಲಿ ಅರಳಿ ಮರದ

ರೆಂಬೆಗಳಲ್ಲಿ 
ಎಳೆ ಚಿಗುರು ಹುಟ್ಟಿದ್ದು
ನಿನ್ನ ಮೆಲ್ಲುಸಿರಿಗೆ ಎಂದು ಕೊಂಡೆ
ಬೆಳೆದು ಹಸಿರಾಯಿತು
ಮರ-ಮನ


-2-
ನಿನ್ನ
ಅಂತರ್ಧಾನದ 
ಅರಿವಲ್ಲಿ ನಿತ್ರಾಣವಾಗುತ್ತಾ, ಆಗುತ್ತಾ ಸತ್ತೆ
ಮತ್ತೆ ಬದುಕುತ್ತಾ, ಅಲೆದೆ
ಬೀದಿ ಬೀದಿ; ಮರೆತು ಹೋಯಿತು
ಅದು ಬೀದಿಯಲ್ಲ
ಎಂಬುದು
ಅಲ್ಲ; ಸುಡುಗಾಡು


-3-
ಬೆನ್ನು ಸೀಳಿ ಹುಟ್ಟಿದ 
ನಿನ್ನ 
ನಗೆಗೆ ಕೆಣಕುವ ಶಕ್ತಿ ಇತ್ತು
ಆದ್ಯಂತವನ್ನೆಲ್ಲಾ.....
ನೆನೆಸುತ್ತಾ ಕಣ್ಣೀರು ಜಿನುಗುವ
ಮರುಳಿಗೆ 'ಪಾಪ'ದ ಹೆಸರಿಟ್ಟೆ
ಹರಿದು ಕಣ್ಣೀರು ಸಮುದ್ರ ಸೇರಿದ್ದಕ್ಕೋ
ಈಗಲೂ 
ಆ ನೀರು ಉಪ್ಪುಪ್ಪು


-4-
ಬಿಚ್ಚುಗತ್ತಿಯಲ್ಲದ ಮಾತು
ಕಣ್ಣಲಗು
ಸೋತು ಹೋಗಿದ್ದೆ
ನಾನು
ಅರ್ಧ ಚಂದ್ರನ ಕಂಡು 
ಕೈ ಚಾಚಿದೆ,
ಅಲ್ಲಿ ಮಿನುಗಿ ನಕ್ಕವಳು 
ನೀನು
ತಾರೆ?!
ಹುಡುಗಿ?!


ನನಗೀಗಲೂ ಗೊಂದಲ
...............................................
............................................................



No comments:

Post a Comment