Monday, October 10, 2011


ಆಭಾರ ಮನ್ನಣೆ

ಒಂದು ಕಡೆ ಸಂತೋಷವೂ , ಒಂದು ಕಡೆಗೆ ಬೇಸರವೂ ಆಗುವಂಥಾ ಸ್ಥಿತಿಯಲ್ಲಿ ನಾನಿದ್ದೇನೆ. ಇದೇ 15 ರಂದು ನಾನು ಅಧಿಕೃತವಾಗಿ ಸಮಯವಾಹಿನಿ ಹಾಗೂ ಚಾಮರಾಜನಗರವನ್ನು ಬಿಡುತ್ತಿದ್ದೇನೆ. ಎದೆ ಭಾರವಾಗುತ್ತದೆ. ಸಂತೋಷಕ್ಕೆ ಕಾರಣ ನಾನು ಪ್ರಜಾವಾಣಿ ಬಳಗಕ್ಕೆ ಆಯ್ಕೆಯಾದದ್ದು. ಬೇಸರದ ವಿಷಯ ನಾನು ಸಮಯ ಹಾಗೂ ಚಾಮರಾಜನಗರದ ಹಲವು ಒಳ್ಳೆಯ ಗೆಳೆಯರನ್ನು ಬಿಟ್ಟುಹೋಗುತ್ತಿರುವುದು. ಸಮಯ ಹಾಗೂ ಚಾಮರಾಜನಗರ ನನಗೆ ಸಾಕಷ್ಟು ಕಲಿಸಿವೆ. ಮುಖ್ಯವಾಗಿ ಗೆಳೆತನ ಹಾಗೂ ಮತ್ಸರದ ಬಗ್ಗೆ. ಎಲ್ಲೇ ಹೋದರೂ ಒಂದಷ್ಟು ಒಳ್ಳೆಯ ಗೆಳೆಯರು ಸಿಗುವಂತೆ ಕೆಟ್ಟ ಹಿತಶತ್ರುಗಳೂ ಸಿಗುತ್ತಾರ. ಇವರನ್ನು ಶತ್ರುಗಳು ಎಂದೂ ಕರೆಯಲು ಆಗದು. ಏಕೆಂದರೆ ಇವರು ನಮ್ಮಜೊತೆ ನಗು ನಗುತ್ತಲೇ ಮಾತನಾಡುತ್ತಾರೆ, ನಮ್ಮ ಜೊತೆಯೆ ಇರುತ್ತಾರೆ, ಅವಕಾಶ ಸಿಕ್ಕಾಗ ಬೆನ್ನಿಗೆ ಚೂರಿ ಹಾಕಲು ತವಕಿಸುತ್ತಾರೆ..........................

ಇದೆಲ್ಲಾ ಬರೆಯಲು ಹೋದರೆ ಮತ್ತದೇ ಹಳೆಯ ರಾಗವಾಗುತ್ತದೆ. ಇಷ್ಟೂ ದಿನ ಸಮಯ ಹಾಗೂ ಚಾಮರಾಜನಗರದಲ್ಲಿ ಆದವರು, ಆಗದವರೂ ಎಲ್ಲರೂ ನನ್ನ ಕಾರ್ಯದಲ್ಲಿ ಸಹಕರಿಸಿದ್ದಾರೆ. ಅವರಿಗೆಲ್ಲಾ ನಾನು ಆಭಾರಿ. ನನ್ನ ಕೆಲಸದಲ್ಲಿ ಇಲ್ಲಿಯ ವರೆಗೂ ಜೊತೆಯಾಗಿ ನಿಂತ ಎಲ್ಲರನ್ನೂ ನಾನು ಜೀವನದಲ್ಲಿ ಮರೆಯಲಾರೆ. ಪತ್ರಿಕೋದ್ಯಮದ ಮೊದಲ ಹೆಜ್ಜೆಯಾಗಿ ನಾನು ಕಾಲೂರಿದ್ದು ಚಾಮರಾಜನಗರದಲ್ಲಿ. ನಗರ ನನಗೆ ಮೊದಲ ಪ್ರಯೋಗಶಾಲೆ, ಈ ಒಂದೂ ಕಾಲು ವರ್ಷದ ಪ್ರಯೋಗದಲ್ಲಿ ತಪ್ಪು ಫಲಿತಾಂಶಗಳಿಗಿಂತಾ ಸರಿಯಾದ ಫಲಿತಾಂಶಗಳೇ ಸಿಕ್ಕಿವೆ, ಅದಕ್ಕಾಗಿ ನಾನು ಚಾಮರಾಜನಗರಕ್ಕೆ ಕೃತಜ್ಞ.. (ಮಹಾ ಹರ್ಷಿ..)

ಮುಂದಿನ ದಾರಿ ಬಗ್ಗೆ ನಾನು ಸದಾ ಆಶಾವಾದಿ. ಹಾಗಾಗಿ ಮುಂದಿನದ್ದರ ಬಗ್ಗೆ ಹೆಚ್ಚು ಯೋಚಿಸಲಾರೆ.

ನಾಳೆ ನನ್ನದೇ ಎಂಬ ನಂಬಿಕೆಯಲ್ಲೇ..........

ಚಾಮರಾಜನಗರ ಹಾಗೂ ಸಮಯಕ್ಕೆ ವಿದಾಯ ಹೇಳುತ್ತಾ.....

ನಿಮ್ಮವನು
ದಯಾನಂದ 

No comments:

Post a Comment