Thursday, June 14, 2012

ಮನಸು ತಲ್ಲಣಿಸುತಾವೋ

ಯಾತಕ್ಕೆ ಮಳೆ ಹೋದವೋ
ಶಿವ ಶಿವಾ ಲೋಕ ತಲ್ಲಣಿಸತಾವೋ..

ಎದೆಯೊಳಗ ಬಯಲ ಉತ್ತಿ
ಮನಸಿನ ತುದಿಯ ಮೊನಚ ಕೆತ್ತಿ
ತಿಳಿ ಹೇಳಿ ಮಳೆ ಹೋದವೋ
ನಿನ್ನಂಥ ಧಣಿಯ ನಾವ್ ಮರೆತೆವಲ್ಲೋ

ಯಾವೂರ ಸೀಮೆಯವಳೋ
ನಮ್ಮೂರ ಬೀದಿಲಿ ನಡೆದ್ಹೋದಳೋ
ನಿದಿರೇಯ ಕದ್ದೋದಳೋ
ಎದೆಯಾಗೆ ಕಿಚ್ಚನ್ನ ಹಚ್ಚೋದಳೋ

ಬೊಗಸೇಯ ಕಣ್ಣ ಚೆಲುವೆ
ನಕ್ಕರೆ ಮೋಡ ಮುಸುಕಾಗ ಮಳೆಯೊ
ಅತ್ರಿಲಿ ಮನ ಕೊಟ್ಟಳೋ
ಘಟ್ಟಕ್ಕೆ ನೆರೆಯಲ್ಲ ಬಯಲೆಂದಳೋ

ಗುರಿ ಇಲ್ಲ ತಳದಿ ಒಡಕು
ಮೇಲೆರಿ ಬರಿಯ ಮಾತಿನ ಜಾತಕ
ತಡಿಯಲ್ಲಿ ಬಿಟ್ಟೋದಳೋ
ಕಡಲೀಗೆ ಹಡಗೀನ ಜೊತೆ ಎಂದಳೋ

ಯಾತಕ್ಕೆ ಮಳೆ ಹೋದವೋ
ಶಿವ ಶಿವಾ ಮನಸು ತಲ್ಲಣಿಸುತಾವೋ

1 comment:

  1. ತಲ್ಲಣಿಸದಿರು ಕಂಡ್ಯ ತಾಳು ಮನವೇ..

    ReplyDelete