Monday, August 1, 2011

ಹಾದರ ಅದರ ಹೆಸರಲ್ಲ!!
ಊರು, ಕೇರಿ, ಸಾಗರ, ಪ್ರವಾಹ, ಪ್ರಳಯಗಳ
ಸಾರಿಸಿ ಗುಡಿಸಿ ರಂಗೋಲೆ ಹಾಕಿ
ಕಸವೆಲ್ಲ ಹಸನುಮಾಡಿ
ಗೊಬ್ಬರವಾಗಿಸಲು
ತಿಪ್ಪೆಸೇರಿಸಿದೆ;
ನೆಲವೆಲ್ಲ ಹಸಿರಾದ ಮೇಲೆ
ಮೇಲೆ ನಿಂತು ನಗುವ
ಸೂರ್ಯನೂ ನೀನೆ..

ಬೆಟ್ಟ, ಬೋಳು ಗುಡ್ಡ,
ಕಾವು, ಹಸಿವು, ನಿದ್ದೆ , ಮಂಪರುಗಳ
ಕಳೆದು ಬಂದೆ,
ನೀನು ನೀನಾಗಿ
ಬಂದದ್ದೇ
ಸೋಜಿಗ..!

ಮನಸ್ಸು ಕೂಡಬೇಕಿತ್ತು
ಮುಖ್ಯ;
ಹರಿದ ಬಾಳೆ ಎಲೆಯಾಗಿ ಗಾಳಿಗೆ,
ತರಗಾಗಿ ಬೆಂಕಿ ಉರಿನಾಲಿಗೆಗೆ
ನಿನ್ನ ಎದೆ ಬಾನಲ್ಲಿ
ಹೊಗೆ ಎದ್ದವನು ನಾನು.

ಜೀವಕ್ಕೆ ಉಸಿರಾಗಿ
ಹಿಡಿಬೇವು ಹಿಡಿದು, ಜಗಿದು
ಕಹಿತೋರಿ,
ಮೊಲೆವಾಲು ಕುಡಿಸಿದವಳು,
ನಿನ್ನ ಗರ್ಭದಿಂದ
ನನ್ನ ನಾಭಿಗೊಂದು
ಕರುಳಬಳ್ಳಿ;
ಹಾದರ ಅದರ ಹೆಸರಲ್ಲ?!
(01-08-2011)

No comments:

Post a Comment